ಬೇರ ತಣ್ಣನೆಯ ಗಾಳಿಯಲ್ಲಿ ಬೆಂಕಿಯ ಕಿಡಿ - 3/5 ***
Posted date: 20 Tue, Jun 2023 09:10:38 AM
ಕರಾವಳಿಯ  ಗೇಟ್ ಎಂಬ ಊರಲ್ಲಿ  ನಡೆಯುವ  ಸಂಘರ್ಷದ ಕಥೆಗೆ ಕಮರ್ಷಿಯಲ್ ಟಚ್ ಕೊಟ್ಟು ನಿರ್ದೇಶಕ ವಿನು ಬಳಂಜ ಅವರು ಬೇರು ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.  ಸಲೀಮ್(ಯಶ್ ಶೆಟ್ಟಿ) ಹಾಗೂ ವಿಷ್ಣು(ರಾಕೇಶ್ ಮಯ್ಯ) ಒಡ ಹುಟ್ಟಿದವರಲ್ಲದಿದ್ದರೂ ಸೋದರರಿಗಿಂತ ಹೆಚ್ಚು ಪ್ರೀತಿ ಇಟ್ಟುಕೊಂಡವರು. ಹಾಗೆ ನೋಡಿದರೆ ಇವರಿಬ್ಬರೂ ಬೇರೆ ಬೇರೆ ಕೋಮಿವನವರು. ಒಬ್ಬರಿಗೊಬ್ಬರು ಪ್ರಾಣ ಕೊಡಲೂ ಹಿಂಜರಿಯದ ಜೀವದ ಗೆಳೆಯರು, ಇವರಿಬ್ಬರ ತಾಯಂದಿರೂ ಒಂದೇ ಮನೆಯವರಂತಿದ್ದಾರೆ, ಆದರೆ ಊರಿನ   ಮುಖಂಡರಾದ  ಕೇಶವಾನಂದ ಹಾಗೂ  ಅಸಾದುಲ್ಲ ತಮ್ಮ ಸ್ವಪ್ರತಿಷ್ಠೆ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವಂಥವರು. ಸಲೀಮ್ ಒಂದು ಮ್ಯೂಸಿಯಂ ಇಟ್ಟುಕೊಂಡಿದ್ದರೆ, ವಿಷ್ಣು ಗೋಶಾಲೆ ನೋಡಿಕೊಂಡಿದ್ದರೂ,  ಹೆಚ್ಚಾಗಿ ಸಲೀಮ್ ಜೊತೆ ಮ್ಯೂಸಿಯಂನಲ್ಲೇ ಕಾಲ ಕಳೆಯುತ್ತಿರುತ್ತಾನೆ. ಅದೊಂದು ಅಪರೂಪದ ವಿಶಿಷ್ಠ ಸಂಗ್ರಹ ಗಳನ್ನೊಳಗೊಂಡ ಮ್ಯೂಸಿಯಂ. ಇಲ್ಲಿರುವ ಪುರಾತನ ಕಾಲದ ಇತಿಹಾಸ ಹೇಳುವ ನಾಲ್ಕು ದೇವರ ಕಂಬಗಳು ವಿಶೇಷ. ಈ ಕಂಬಗಳನ್ನು ತೆರವು ಗೊಳಿಸಬೇಕೆಂದು ಅಸಾದುಲ್ಲಾ ಸಾಕಷ್ಟುಬಾರಿ ಪ್ರಯತ್ನಿಸಿದರೂ ಈ ಗೆಳೆಯರ ಹಠದಿಂದ ಅದು ಸಾಧ್ಯವಾಗಿರುವುದಿಲ್ಲ, ಅದೇಕಾರಣಕ್ಕೆ ಇಬ್ಬರ ಮಧ್ಯೆ ಜಾತಿಯನ್ನು ತಂದಿಟ್ಟು ನೋಡಿದರೂ ನಾವಿಬ್ಬರೂ ಪ್ರಾಣ ಬಿಟ್ಟೇವು, ನಮ್ಮ ಸಂಸ್ಕೃತಿಯ ಪ್ರತೀಕವಾದ ಕಂಬಗಳನ್ನು ಬಿಡೆವು ಎಂದು ಹಠ ಹಿಡಿಯುತ್ತಾರೆ, ಈ ನಡುವೆ ಉಗ್ರವಾದಿಗಳ ಭಯೋತ್ಪಾದಕ ಚಟುವಟಿಕೆಗಳ ಝಲಕ್ ಕೂಡ ಕಥೆಯಲ್ಲಿ ಇಣುಕುಹಾಕುತ್ತದೆ, ಜೊತೆಗೆ ಎಟಿಎಸ್ ಆಫೀಸರ್ ಭುವನೇಂದ್ರ ಅವರ  ಪರ್ಸನಲ್ ಲೈಫ್‌ ಸ್ಟೋರಿಯನ್ನೂ ಚಿತ್ರಕಥೆಗೆ ಲಿಂಕ್ ಮಾಡಿರುವುದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುತ್ತ ಸಾಗುತ್ತದೆ, ಚಿಕ್ಕ ವಯಸಿನ ಮಗನನ್ನು ಕಳೆದುಕೊಂಡ ಆ ಎಟಿಸ್ ಆಫೀಸರ್ ಮಗ ಕೂಡ ಒಬ್ಬ ಟೆರರಿಸ್ಟ್ ಆಗಿ ಬದಲಾಗಿರುತ್ತಾನೆ. ಚಿತ್ರದ ಕಥೆ ಇಂಟರ್‌ವೆಲ್ ಬ್ಲಾಕ್ ವೇಳೆಗೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತದೆ, ನಂತರ  ಹಂತ ಹಂತವಾಗಿ ನೋಡುಗರಲ್ಲಿ ಕ್ಯೂರಿಯಾಸಿಟಿ ಬೆಳೆಸುತ್ತ ಸಾಗುತ್ತದೆ. ಹರ್ಷಿಕಾ  ಪೂಣಚ್ಚ(ಸಂಸ್ಕೃತಿ) ಪ್ರಾರಂಭದಲ್ಲಿ  ಟ್ರಾವೆಲ್  ಆಫೀಸ್‌ನಲ್ಲಿದ್ದುಕೊಂಡು  ಹನಿಟ್ರಾಪ್ ಮಾಡುವ ಯುವತಿಯ ಹಾಗೆ ನಟಿಸಿದರೂ,  ಕೊನೆಯ ಭಾಗದಲ್ಲಿ  ಆಕೆ ಯಾರು ಎನ್ನುವುದು ರಿವೀಲ್ ಆಗುತ್ತದೆ, ಅನ್ಯಕೋಮಿನ ಗೆಳೆಯರಿಬ್ಬರು ಹಾಗೂ ಮ್ಯೂಸಿಯಂನ ನಾಲ್ಕು ಕಂಭಗಳನ್ನಿಟ್ಟುಕೊಂಡು ನಿರ್ದೇಶಕ ವಿನು ಬಳಂಜ ಅವರು ಒಂದು ಅದ್ಭುತವಾದ ಕಥೆಯನ್ನು ಹೆಣೆದಿದ್ದಾರೆ. ಬೇರ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ಒಂದೊಂದು ಕಥೆಯನ್ನು ಹೇಳುತ್ತ ಹೋಗುತ್ತವೆ, ಕೇಶವಾನಂದನ ಮಗಳು ಸವಿತಾ ವಿಷ್ಣು ಲವ್‌ಸ್ಟೋರಿ, ಅಸಾದುಲ್ಲ  ಕೇಶವಾದಿತ್ಯನ  ಸ್ವಪ್ರತಿಷ್ಠೆ, ಅಕ್ಕ ತಂಗಿಯರಂತಿರುವ ಸಾಯಿರಾ, ಶಾರದಮ್ಮ, ಕರ್ತವ್ಯ ಸಂಬಂಧದ ಮಧ್ಯೆ ತೊಳಲಾಡುವ ಎಟಿಸ್ ಆಫೀಸರ್ ಭುವನೇದ್ರ(ಸುಮನ್) ಹೀಗೆ ಪ್ರತಿ ಪಾತ್ರವೂ ವೀಕ್ಷಕನ ಮನಸಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಗೇಟ್‌ನಲ್ಲಿ  ಕೋಮುಗಲಭೆ ಸೃಷ್ಟಿಸಲು  ಶಂಕರ ಶೆಟ್ಟಿ(ಹರ್ಷವರ್ಧನ್)ಯನ್ನು ರೌಡಿಗಳ ಮೂಲಕ ನಡುರಸ್ತೆಯಲ್ಲೇ ಹತ್ಯೆ ಮಾಡುವುದು, ದೇವರ ಕಂಭಗಳನ್ನು ನೆಪವಾಗಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸುವುದು, ಇದೆಲ್ಲವೂ ಚಿತ್ರದ ಪ್ಲಸ್ ಅ
ಪಾಯಿಂಟ್. ನಿರ್ದೇಶಕ ವಿನು ಬಳಂಜ ಅವರು ತಣ್ಣನೆಯ ಗಾಳಿಯಲ್ಲಿ ಹುಟ್ಟಿಕೊಳ್ಳುವ ಬೆಂಕಿಯ ಕಿಡಿಯಂತೆ  ಸಂಘರ್ಷದ ಕಥೆಯನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಚಿತ್ರದ ಬಿಜಿಎಂ ಹಾಗೂ, ಛಾಯಾಗ್ರಹಣ  ಕಥೆಗೆ ಪೂರಕವಾಗಿ ಮೂಡಿಬಂದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed